This article was written by Karthik Rai (Batch of 2023) as a part of our language week series. The illustration is by Gunjan Jadiya (Batch of 2023). An English translation for the same is provided below.
ಭಾಷಾ ಮಾಧ್ಯಮವು ಅತ್ಯಂತ ಪ್ರಬಲ ಮಾಧ್ಯಮ ಎಂದು ಬಲ್ಲವರು ಅಭಿಪ್ರಾಯಪಡುತ್ತಾರೆ ನನ್ನ ಮಾತೃಭಾಷೆ ತುಳು. ಆದರೆ ನಾನು ಚಿಕ್ಕಂದಿನಿಂದಲೂ ವಿದ್ಯಾಭ್ಯಾಸ ಮಾಡಿರುವುದುಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ. ಸಂಸ್ಕೃತ ನನ್ನ ಎರಡನೇ ಭಾಷೆಯಾಗಿತ್ತು. ನಾನು ಚಿಕ್ಕವನಾಗಿದ್ದಾಗ ನಮ್ಮ ಮನೆಯಲ್ಲಿ ನಮ್ಮ ತಾಯಿ ಹಿಂದಿ ಧಾರಾವಾಹಿಗಳನ್ನು ನೋಡುತ್ತಿದ್ದುದನ್ನು ನಾನು ಸಹ ನೋಡುತ್ತಿದ್ದೆ. ಆದರೆ ನನ್ನ ಎಳೆಯ ಪ್ರಾಯದಿಂದ ನಾನು ವಾಸ ಮಾಡಿರುವುದು ಬೆಂಗಳೂರಿನಲ್ಲಿ. ಹೀಗಿದ್ದರೂ ಕೂಡ ಚಿಕ್ಕಂದಿನಿಂದಲೂ ನಾನು ಭಾಷೆಯ ಮಹತ್ವವನ್ನು ತಿಳಿಯುವ ಪ್ರಯತ್ನವನ್ನು ಮಾಡಿರಲಿಲ್ಲ.
ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿದ ಮೇಲೆ ನಾನು ನನ್ನ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕಾಗಿ ಆಯ್ಕೆ ಮಾಡಿದ್ದು ಬೆಂಗಳೂರಿನ ಪ್ರತಿಷ್ಟಿತ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯನ್ನು. ಎನ್.ಎಲ್.ಎಸ್ ನಿಜಕ್ಕೂ ವಿವಿಧ ಭಾಷೆ ಹಾಗೂ ಅಸಂಖ್ಯಾತ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿರುವ ವಿದ್ಯಾರ್ಥಿಗಳ ಸಮೂಹ. ಇಲ್ಲಿ ನೀವು ಭಾರತೀಯ ಹಾಗೂ ಇತರ ದೇಶಗಳ ವಿದ್ಯಾರ್ಥಿಗಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಒಡನಾಟದಲ್ಲಿರುತ್ತೀರಿ. ಇಲ್ಲಿ ಕೆಲವರು ಬಹಳ ಮಾತುಗಾರರಾದರೆ, ಇನ್ನು ಕೆಲವರು ಶುದ್ಧ ಮೌನಿ ಬಾಬಾಗಳು!
ಆದರೆ ಇಲ್ಲಿ ನಾನು ಒಂದು ವಿಶೇಷತೆಯನ್ನು ನೋಡಿದೆ. ಇಲ್ಲಿನ ಹೆಚ್ಚಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರರು, ಹಿಂದಿ ಭಾಷಿಕರಾಗಿದ್ಧಾರೆ. ಹಾಗಾಗಿ ನನ್ನ ಕಾಲೇಜಿನ ಹೆಚ್ಚಿನ ಮಿತ್ರರು ಹಾಗೂ ಸಹಪಾಠಿಗಳು ಕೂಡ ಹಿಂದಿ ಮಾತೃಭಾಷೆ ಯವರೇ ಆಗಿದ್ದರು.
ಇಲ್ಲಿನ ಬದುಕು ನನಗೆ ಕನ್ನಡ ಭಾಷೆಯನ್ನು ನಾನು ಅದೆಷ್ಟು ತೀವ್ರವಾಗಿ ಪ್ರೀತಿಸುತ್ತಿದ್ದೇನೆ ಎಂಬ ಅರಿವನ್ನು ಮೂಡಿಸಿತು. ಈ ಹಂತದಲ್ಲಿ ಭಾಷಾಮಾಧ್ಯಮದ ಮಹತ್ವವನ್ನು ನಾನು ನಿಜವಾಗಿಯೂ ಅಂತರಂಗದಿಂದ ಅರಿತುಕೊಂಡೆ. ಆದರೆ ನನಗೆ ನನ್ನ ಕನ್ನಡದಲ್ಲಿ ಮಾತನಾಡುವ ತುಡಿತ ಉಂಟಾದರೂ ಮಾತಿಗೆ ಯಾರೂ ಗೆಳೆಯರೇ ಸಿಗುತ್ತಿರಲಿಲ್ಲ.
ಇಂತಹ ಸಂದರ್ಭದಲ್ಲಿ ಅಂದುಕೊಂಡಿದ ಮೂಲದಿಂದ ಒಂದು ಆಶಾಕಿರಣ ಗೋಚರಿಸಿತು. ಇಲ್ಲಿನ ಕೆಲಸಗಾರರು ಅಂದರೆ ಲಾ ಸ್ಕೂಲ್ ಕ್ಯಾಂಪಸ್ಸಿನಲ್ಲಿ ಇದ್ದ ಕ್ಯಾಂಟೀನ್ ಕೆಲಸಗಾರರು, ಸ್ವಚ್ಛತಾ ಕೆಲಸಗಾರರು ಹಾಗೂ ಸುರಕ್ಷಾ ಕರ್ಮಚಾರಿಗಳು ಕನ್ನಡ ಭಾಷಿಕರಾಗಿದ್ದರು ಮತ್ತು ಅವರೆಲ್ಲರೂ ಕನ್ನಡದಲ್ಲಿ ಮಾತನಾಡುತ್ತಿದ್ದರು. ಈ ಕಾರಣಕ್ಕೆ ನಾನು ಕನ್ನಡದಲ್ಲಿ ಅವರೊಂದಿಗೆ ಮಾತಿಗಿಳಿದಾಗ ಅವರೊಡನೆ ಒಂದು ಆತ್ಮೀಯತೆಯ ಅತ್ಯಂತ ಸುಂದರ ಅನುಭವವನ್ನು ಪಡೆದುಕೊಂಡೆ. ಇದರಿಂದಾಗಿ ಅವರು ತಮ್ಮ ಮನೆಯ ಮಕ್ಕಳ ಹಾಗೂ ಇನ್ನಿತರ ಹಲವಾರು ವಿಷಯಗಳನ್ನು ಹಾಗೂ ಸಮಸ್ಯೆಗಳನ್ನು ನನ್ನೊಂದಿಗೆ ಮುಕ್ತವಾಗಿ ಹಂಚಿಕೊಳ್ಳತೊಡಗಿದರು.
ಸುರಕ್ಷಾ ಕರ್ಮಚಾರಿಗಳು ತಮ್ಮ ಮಕ್ಕಳ ಭಾವಚಿತ್ರ ಹಾಗೂ ಅವರ ಆಸೆ-ಅಭಿಲಾಷೆಗಳನ್ನು ನನ್ನೊಂದಿಗೆ ಹಂಚಿಕೊಂಡರು. ಕ್ಯಾಂಟೀನಿನ ಎಲ್ಲರ “ಅಮ್ಮ” ನಾನು ಬಜ್ಜಿ ಬೋಂಡಾ ಕೇಳಿದಾಗ ನಗುಮೊಗದಿಂದ ನನಗೆ ಬಡಿಸಿದರು. ಗೌಡ ಸರ್ ಅವರು ಕಳೆದುಹೋದ ಮುಂಬೈಯ ಬದುಕಿನ ಘಟನೆಗಳನ್ನು ಆತ್ಮೀಯವಾಗಿ ನನ್ನೊಂದಿಗೆ ಹಂಚಿಕೊಂಡರು. ಗ್ರಂಥಾಲಯದ ಜಯರಾಮ್ ಸರ್ ನನ್ನನ್ನು ಆತ್ಮೀಯತೆಯಿಂದ ಮತ್ತು ಪ್ರೀತಿಯಿಂದ “ಬಾಸು” ಎಂದು ಕರೆಯತೊಡಗಿದರು ಹಾಗೂ ಹಾಸ್ಯ ಚಟಾಕಿಗಳನ್ನು ನನ್ನೊಂದಿಗೆ ಹಂಚಿಕೊಳ್ಳತೊಡಗಿದರು. ಈಗ ನನಗೆ ಭಾಷೆಯ ಪ್ರಾಮುಖ್ಯತೆ ಮನಸ್ಸಿಗೆ ತಟ್ಟತೊಡಗಿತ್ತು. ಅಪರಿಚಿತರೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಲು ಭಾಷೆಯು ಎಷ್ಟು ಮುಖ್ಯ ಎಂದು ನಾನು ಊಹಿಸಿರದ ಮೂಲದಿಂದ ನನ್ನ ಅನುಭವಕ್ಕೆ ಬಂದಿತು. ಈ ರೀತಿ ಲಾ ಸ್ಕೂಲ್ ಕ್ಯಾಂಪಸ್ಸಿನ ಉದ್ಯೋಗಿಗಳೊಂದಿಗಿನ ಒಡನಾಟದಿಂದ ನನಗೆ ಬದುಕಿನಲ್ಲಿ ಒಂದು ಅನಿರ್ವಚನೀಯ ಅನುಭವ ದೊರೆಯಿತು.
ಹೀಗೆ ಭಾಷೆಯ ಮಹತ್ವ ಮತ್ತು ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅದರ ಪ್ರಾಮುಖ್ಯತೆಯನ್ನು ನಾನು ಪ್ರಥಮ ಬಾರಿಗೆ ಲಾ ಸ್ಕೂಲ್ ಕ್ಯಾಂಪಸ್ಸಿನಲ್ಲಿ ಅನುಭವಿಸಿಕೊಂಡೆ.
– ಕಾರ್ತಿಕ್ ರೈ
Kannada in My Law School Life
They say language has power.
Having Tulu as my mother tongue, having studied in an English Medium school with Sanskrit as my second language, having watched Hindi soaps as I sat with my mother, and having lived in Bangalore for over a decade and learnt Kannada, I should have been the first one to realise this. However, for some reason, I didn’t.
And then life brought me to NLS.
NLS really is the land of diverse cultures. You meet people of all kinds, some extremely talkative, some extremely silent. However, I found one thing largely prevalent here – most of NLS comprised Hindi-speaking students (I might be wrong, though). Most of the friends I have made at NLS speak Hindi.
Soon, for some reason, strangely, I began missing Kannada – something that had never happened before! Nostalgia must be the right word to describe this feeling. For the first time I felt the power of language over me. I wanted to speak in Kannada, but I couldn’t find people to do that!
But that is when I found help in one of the more overlooked, but fundamental elements of NLS – the staff members. Many of them were locals and spoke Kannada. And I instantly connected with them. Maybe they felt the same too! Because they started chatting with me about stories from their daily life outside of Law School – the security guards who would show me the photos of their children and speak about their childhood and their real dreams; the Ammas at the mess who would ask me if I wanted the bajji bondas with a smile on their face; Gowda Sir who would talk, in his excited mood, of his life in Mumbai; Jayaram Sir from the library who would affectionately refer to me as “bossu” and crack jokes that we would laugh at together; and so on.
That was when I realised the power of language and how it can connect people in the most unimaginable ways. I initially felt lonely at NLSIU, but talking to these kind people gave me a form of comfort that I had not expected at all. Perhaps that is the power of language.
They say language has power. And I, for the first time, felt it at NLS.
Comments